ನಾನು ಇಂದು ನಿನ್ನಿಂದ ದೂರದಲ್ಲಿರುವೆ
ಇದು ಪ್ರಕೃತಿಯ ಅಸಹಜತೆಯೋ ಎಂಬಂತಿದೆ
ಸಪ್ತ ಸಾಗರದಾಚೆ ಸುಪ್ತ ಸಾಗರ ಇದೆ ಎಂದು
ಹುಡುಕಿ ಬಂದವ ನಾನಲ್ಲ
ಹೇಗೆ ಮರೆಯಲಿ ನಿನ್ನಯ ಆ ಬಿಗಿ ಅಪ್ಪುಗೆ
ಹೇಗೆ ಮರೆಯಲಿ ನಮ್ಮ ಆ ಸಲ್ಲಾಪದ ಮಾತು
ನಿನ್ನಯ ಚಹರೆ ಇಂದೂ ಇದೆ ಕಣ್ಣ ಮುಂದೆ
ಹಿಂದೆಂದೂ ನಿನ್ನಿಂದ ಇಷ್ಟು ದೂರ ಇರಲಿಲ್ಲ
ಇವು ಕೇವಲ ಪದಗಳ ಸಾಲಲ್ಲ
ನನ್ನೆಯ ತುಡಿತದ ಭಾವನಾ ಲಹರಿ
ಇನ್ನು ಆಗದು ಈ ವಿರಹದ ಬೇಗೆ
ಬಂದು ಬಿಡುವೆ ನಿನ್ನಲ್ಲಿಗೆ ನಾ ಇಂದು
Sunday, November 29, 2009
Subscribe to:
Posts (Atom)