ನಿನ್ನಯ ಒಡನಾಟ ಬೆಳಕಿನ ತುಂಟಾಟ,
ಬಿಂಕ ಬಿಗುಮಾನ ಪಟಾಕಿಯ ಸರಸರ
ನಿನ್ನಡುಗೆಯ ಸವಿ ನನಗೆ ಸ್ವರ್ಗದ ಪರಿ,
ನೀ ನನಗಾಗಿ ಅವತರಿಸಿದ ಲಕ್ಷ್ಮಿಯೇ ಸರಿ
ಹಿಂದೆ ತವರಿನ ಮನೆಯ ಬೆಳಗಿದೆ ನೀನು,
ಇಂದು ಬೆಳಗು ನನ್ನಯ ಹ್ರ್ಯುದಯವನು
ಒಲ್ಲದ ಮುನಿಸನು ನನ್ನೊಡನೆ ಬಿಡು,
ದೀಪಾವಳಿ ಮುಗಿದೊಡನೆ ಹಿಂದುರಿಗಿ ಬಂದು ಬಿಡು
-- ಇಂತಿ ನಿನ್ನ ಪ್ರೀತಿಯ ಪತಿ